ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣಗಳು
ಆಧುನಿಕ ತಂತ್ರಜ್ಞಾನಗಳ ಪರಿಣಾಮದಿಂದಾಗಿ ಇಂದು ಸಮೂಹ ಮಾಧ್ಯಮಗಳು ಅತಿಹೆಚ್ಚಾಗಿ ಬಳಕೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮಧ್ಯಮ ಗಳಿಲ್ಲದೆ ಇಂದು ಮನುಷ್ಯ ಬದುಕಲು ಅಸಾಧ್ಯವಾಗಿದೆ. ಇಂದಿನ ಜನಜೀವನದಲ್ಲಿ ಅತ್ಯಂತ ಕನಿಷ್ಠ ನಾಗಿರುವ ಮನುಷ್ಯ ಅಥವಾ ಅನಕ್ಷರ ಕುಷ್ಕಿಯಾಗಿರು ವಂತ ಮನುಷ್ಯ ಇಂದು ವಾಟ್ಸಾಪ್ ಫೇಸ್ಬುಕ್ ಜಾಲತಾಣಗಳನ್ನು ಬಳಸುತ್ತಿರುವುದು ಒಂದು ವಿಸ್ಮಯವೇ ಸರಿ. ಜಗತ್ತಿನ ಅತಿ ಹೆಚ್ಚು ಭಾಷೆಗಳು ಇವತ್ತಿನ ಮಾಧ್ಯಮ ಯುಗದಲ್ಲಿ ಬಳಕೆಯಾಗುತ್ತಿರುವ ಜಾಲತಾಣಗಳಿಂದ ತಮ್ಮ ಭಾಷೆಯ ಸೊಗಡಿನಲ್ಲಿ ಔನ್ನತ್ಯವನ್ನು ಕಂಡಿವೆ. ಇಂದು ಸಾಮಾಜಿಕ ಜಾಲತಾಣಗಳು ತಮ್ಮ ಕದಂಬಬಾಹುವನ್ನು ಚಾಚಿ ಸಮಾಜವನ್ನು ಪ್ರಗತಿಯತ್ತ ದಾಪುಗಾಲಿಡುತ್ತಿವೆ. ಹಿಂದೊಂದು ಕಾಲವಿತ್ತು ಟೆಲಿಗ್ರಾಮ್ ನಂತಹ ಸಂದೇಶಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ತಲುಪಲು ಎಷ್ಟು ದಿನಗಳು ಬೇಕಾಗುತ್ತಿತ್ತು ಆದರೆ ಇಂದು ಕ್ಷಣಾರ್ಧದಲ್ಲಿ ಬೆರಳ ತುದಿಯಲ್ಲಿ ಯಾವುದೋ ಒಂದು ವಿಷಯವನ್ನು ಬರೆದರೆ ಬಳಸಿದರೆ ಅದು ಇನ್ನೊಂದು ಪರದೆಯಮೇಲೆ ಕೆಲವೇ ಸೆಕೆಂಡುಗಳಲ್ಲಿ ರಿಂಗಣಿಸುತ್ತದೆ. ಟ್ವಿಟರ್ ಫೇಸ್ಬುಕ್ ವಾಟ್ಸಪ್ ನಂತಹ ಸಮೂಹ ಮಾಧ್ಯಮಗಳು ಇಂದು ಜಗತ್ತಿನ ಅನೇಕ ಮಾಧ್ಯಮಗಳನ್ನು ದಂಗುಬಡಿಸಿವೆ. ಪ್ರಿಂಟ್ ಮೀಡಿಯಾ ಮತ್ತು ದೃಶ್ಯ ಮಾಧ್ಯಮಗಳು ಇಂದು ಕ್ರಮೇಣ ಮರೆಯಾಗುವ ಸಂದರ್ಭ ಬಂದೊದಗಿದೆ.
ಧ್ವನಿವರ್ಧಕಗಳ ಮೂಲಕ ಟೈಪಿಸುವಂತಹ ಕೀಲಿಮಣಿಗಳು ಕಾಲಿಟ್ಟಿವೆ. ಇವತ್ತಿನ ಅಭಿವೃಚಿಯನ್ನು ಹೇಳಬೇಕೆಂದರೆ ಚಿಟಿಕೆ ಹೊಡೆಯುವುದರಲ್ಲಿ ಆಶೋತ್ತರಗಳನ್ನು ಜಾಲತಾಣಗಳಲ್ಲಿ ಅಭಿವ್ಯಕ್ತಿಸಬಹುದು. ಇ-ಬುಕ್ಸ್, ಬ್ಲಾಗ್ಸ್, ಟ್ವಿಟ್ಟರ್ ಮುಂತಾದವುಗಳಲ್ಲಿ ಇ-ಪತ್ರಿಕೆಗಳನ್ನು ಇಂದು ಪ್ರಕಟಗೊಳ್ಳುತ್ತಿರುವದು. ತಿಳಿದ ವಿಷಯವೇ ಆಗಿದೆ. ಈ ತಂತ್ರಜ್ಞಾನದ ನೆಪದಲ್ಲಿ ಅನೇಕ ಪ್ರತಿಭೆಗಳು ಜಾಲತಾಣದ ಮೂಲಕ ಪ್ರವೇಶಿಸುತ್ತಿವೆ. ಹೊಸ ರೀತಿಯ ಸಾಹಿತ್ಯ ಮಾಧ್ಯಮಗಳ ಮೂಲಕ ಹುಟ್ಟಿಕೊಳ್ಳುತ್ತಿವೆ. ಯಾವುದೇ ಭಾಷೆಯ ಸಾಹಿತ್ಯವನ್ನು ಭಾಷಾಂತರಿಸಿಕೊಂಡು, ಪ್ರಾದೇಶಿಕ ಭಾಷೆಯಲ್ಲಿ ಒದಗುವಂತೆ ಇಂದಿನ ಜಾಲತಾಣಗಳು ನಮಗೆ ಒದಗಿಸಿವೆ. ಇದರಿಂದ ನಮ್ಮ ಪ್ರಾದೇಶಿಕ ಭಾಷೆ ನಮ್ಮ ಸಂಸ್ಕೃತಿ, ಆರ್ಥಿಕ, ಸಾಮಾಜಿಕ ಸ್ಥಾನಮಾನಗಳು ಹೆಚ್ಚುತ್ತಿವೆ. ಇಂದು ಬದಲಾವಣೆಯ ಗಾಳಿ ಎಗ್ಗಿಲ್ಲದೆ ಬೀಸುತ್ತಿದೆ. ಇದರೊಟ್ಟಿಗೆ ನಡೆಯುವುದು ಅನಿವಾರ್ಯವಾಗಿದೆ. ತಂತ್ರಜ್ಞಾನದ ಇಲ್ಲದೆ ನಾವಿಲ್ಲ ಎನ್ನುವ ಪರಿಸ್ಥಿತಿ ಉಂಟಾಗಿದೆ. ಅಂತರ್ಜಾಲಗಳಲ್ಲಿ ಜ್ಞಾನದ ಬೆಳಕು ವಿಸ್ತಾರವಾಗುತ್ತಾ ಸಾಗುತ್ತಿದೆ.
ಕೀಲಿಮಣಿಗಳಲ್ಲಿ ಸ್ವಾಪ್ ರೈಟಿಂಗ್ ಕೂಡ ಬಂದಿದೆ. ಕಣ್ಣುಮುಚ್ಚಿಕೊಂಡು ಮಣಿಯ ಮೇಲೆ ಬೆರಳುಗಳನ್ನು ಆಡಿಸಿದರೆ ಸಾಕು ಹೇಳಿಕೊಳ್ಳುವಂತಹ ತಂತ್ರಜ್ಞಾನಗಳು ಜಾಲತಾಣಗಳಲ್ಲಿ ಸಿಗುತ್ತಿವೆ. ಆನಂದಿಸುವ, ಸಂತೃಪ್ತಿಪಡುವ, ಪ್ರೀತಿಸುವ ಮನಸ್ಸುಗಳು ಇಂದು ಹೆಚ್ಚಾಗುತ್ತಲಿದೆ. ದಿ ಭಾರತದಲ್ಲಿ ಡಿಜಿಟಲೀಕರಣವಾಗುತ್ತಿದೆ. ಅದಕ್ಕೆಲ್ಲ ಮಾನವನ ಬೌದ್ಧಿಕ ಶಕ್ತಿಯೇ ಕಾರಣ. ಅನೇಕ ಮುಂದುವರೆದ ದೇಶಗಳು ಜಾಲತಾಣಗಳನ್ನು ಅತಿ ಹೆಚ್ಚು ಅಭಿವೃದ್ಧಿ ಪಡಿಸಿದ್ದಕ್ಕಾಗಿ ತಮ್ಮ ಪ್ರಗತಿಯಲ್ಲಿ ಮುಂಚೂಣಿಯಲ್ಲಿವೆ. ಭಾರತದಂತಹ ದೇಶಕ್ಕೆ ಪ್ರಾದೇಶಿಕ ಭಾಷೆಗಳು ಮತ್ತು ಪ್ರಾಚೀನತೆ ಉಳಿಯಬೇಕಾದರೆ, ಸಾಮಾಜಿಕ ಜಾಲತಾಣಗಳಿಗೆ ನಾವು ಹೊಂದಿಕೊಳ್ಳಬೇಕು ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ.
ಯರಿಯಪ್ಪ ಬೆಳಗುರ್ಕಿ MA, M.PHIL. (PHD)
ಕನ್ನಡ ಉಪನ್ಯಾಸಕರು ಸರ್ಕಾರಿ ಮಹಾವಿದ್ಯಾಲಯ ಸಿಂಧನೂರು.
BLOG POET:
ಇಂಟರ್ನೆಟ್ ಹಾಗೂ ಬ್ಲಾಗ್ ನ 'ಅಭಿಷೇಕ' ಮಾಡಿಸಿದರು.
ಮಾಹಿತಿಯ ಕಣಜದ ಆಗರವೇ ಆದರು 'ಶ್ರೀ ನಿಧಿ'
ಗೂಗಲ್ ಗುರವಾಗಿದ್ದರು 'ಉದಯಶಂಕರರು'
THANKS TO TEAM
ಧನ್ಯವಾದಗಳು ಬ್ಲಾಗ್
P.Lankesh
"AVVA"
ತಮ್ಮ ತಾಯಿ ನಿಧನರಾದಾಗ, ಪಿ.ಲಂಕೇಶರು ಬರೆದ ಕವನ:
‘ಅವ್ವ’.
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ
ಹೆಸರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟೋ ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟುಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?
ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.
ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ,
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕ
https://amrutadhre.blogspot.com/2021/01/blog-post.html
ಡಾ. ಚಂದ್ರಶೇಖರ ಕಂಬಾರ ಹಾಗೂ ಮಂಜಮ್ಮ ಜೋಗತಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಇವರಿಗೆ ಅಮೃತ ಧಾರೆ ಬ್ಲಾಗ್ ನ ಸಂಪಾದಕ ಯರಿಯಪ್ಪ ಬೆಳಗುರ್ಕಿ ಅಭಿನಂದನೆ ಸಲ್ಲಿಸಿತ್ತಿದ್ದಾರೆ.
